Monday, 26 October 2015
Thursday, 3 September 2015
ದ.ರಾ.ಬೇಂದ್ರೆ
ದ.ರಾ.ಬೇಂದ್ರೆ ೧೮೯೬-೧೯೮೧
ಬೇಂದ್ರೆ ೧೮೯೬ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡದ ಪ್ರಸಿದ್ದಕವಿ. ಹೊಸಗನ್ನಡದ ಭಾವಗೀತದ ಮೂಲ ಪ್ರವರ್ತಕರಲ್ಲೊಬ್ಬರು. ಹಾಗೂ ಅದರ ಪ್ರಮುಖ ಪ್ರತಿನಿದಿಗಳು. ‘ಅಂಬಿಕಾತನಯದತ್ತ, ಎಂಬುದು ಅವರ ಕಾವ್ಯ ನಾಮ. ಬಿ.ಎ ಪದವಿ ಗಳಿಸಿ ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಬಿಸಿದ ಇವರು ಗೆಳೆಯರಗುಂಪು ಎಂಬ ಸಾಹಿತ್ಯ ಸಂಘವನ್ನು ಕಟ್ಟಿ ಕಾವ್ಯವಾಚನ, ಕಾವ್ಯವಿಮರ್ಶೆ, ಇತರ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಜಯಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲದೆ ಕೆಲಕಾಲ ಆಮಾಸ ಪತ್ರಿಕೆಯ ಸಂಪಾದನೆಯ ಕಾರ್ಯ ನಿರ್ವಹಿಸಿದರು. ಬೇಂದ್ರೆಯವರ ಸಾಹಿತ್ಯ ಕೃಷಿ ವಿಫುಲವಾದದ್ದು.
ಕವಿತೆ, ನಾಟಕ, ವಿಮರ್ಶೆ, ಸಂಶೋಧನೆ. ಎಲ್ಲದರಲ್ಲಿಯೂ ಬೇಂದ್ರೆಯವರ ಕೈವಾಡ ಇದೆ. ಕಾವ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕೃಷ್ಣ ಕುಮಾರಿ ಅವರ ಪ್ರಕಟಿತ ಮೊದಲ ಕವನ. ಬೇಂದ್ರೆಯವರ ಪ್ರಥಮ ಕವನಸಂಕಲನ ‘ಗರಿ, ಯಲ್ಲಿ ಭಾವೋತ್ಕಟತೆ, ಛಂದಸ್ಸಿನ ನಿರರ್ಗಳತೆ ಹಾಗೂ ಗೇಯತೆ ಚನ್ನಾಗಿ ಮೂಡಿಬಂದಿದೆ. ಬೇಂದ್ರೆಯವರ ಪ್ರೇಮಗೀತೆಗಳು ಹಾಗೂ ಸಾಮಾಜಿಕ ಗೀತೆಗಳಲ್ಲಿ ವಸ್ತುನಿಷ್ಟತೆ ಹೆಚ್ಚಾಗಿ ಕಂಡುಬರುತ್ತದೆ. ‘ಕುಣಿಯೋಣು ಬಾರಾ, ‘ಮನದನ್ನೆ, ‘ನೀ ಹೀಂಗ ನೋಡಬ್ಯಾಡನನ್ನ, ಈ ಕವನಗಳ ಮೂಲಭಾವ ಕವಿಯದೇ ಆಗಿದ್ದರೂ ಅದು ಸಾಮಾನ್ಯ ಜೀವನದ ಒಂದು ಭಾಗವಾಗಿ ಮಾತ್ರ ಬರುತ್ತದೆ. ‘ಪುಟ್ಟವಿಧವೆ, ಹೆಣದಹಿಂದೆ, ಅನ್ನಾವತಾರ, ಇಂಥ ಕವನಗಳಲ್ಲಿಯ ಹೃದಯ ವೇದಕತೆ ಈ ಆತ್ಮೀಯತೆಯ ಫಲವಾಗಿದೆ. ಗೀತದಲ್ಲಿ ಕವಿಯ ಸುಖ ದುಃಖಗಳು, ದಾಂಪತ್ಯದ ಸರಸ-ವಿರಸಗಳು, ಸಂಸಾರದ ಅನೇಕ ತಾಪತ್ರಯಗಳು ಇವೇ ಕಾವ್ಯದಲ್ಲಿ ವಸ್ತುವಾಗಿವೆ. ‘ಜೋಗಿ, ಕವನದಲ್ಲಿ ಜೀವನದಲ್ಲಿ ಮಾಡುವ ಕಾಳ ರಾತ್ರಿಯ ಅನುಭವ ವರ್ಣಿತವಾಗಿದೆ.
ಬೇಂದ್ರೆಯವರು ಕೆಲವು ಸಾಂಕೇತಿಕ ಅಸಂಗತ ನಾಟಕಗಳನ್ನು ಬರೆದಿದ್ದಾರೆ. ‘ಸಾಯೋ ಆಟ, ‘ದೆವ್ವದ ಮನೆ, ‘ಹೊಸ ಸಂಸಾರ, ಹಾಗೂ ‘ಜಾತ್ರೆ, ‘ನಗೆಯ ಹೊಗೆ, ಹಾಗೂ ‘ಉದ್ದಾರ, ದುರಂತ ನಾಟಕದ ರೂಪಲಕ್ಷಣಗಳನ್ನೆಲ್ಲ ಒಳಗೊಂಡಿದೆ. ನಗೆಯ ಹೊಗೆ ನಾಟಕದಲ್ಲಿ ನಗೆಯಿದ್ದರೂ ಅದು ಕರುಣಕ್ಕಿಂತ ಹೆಚ್ಚು ಕಟುವಾಗಿದೆ. ಈ ನಾಟಕದಲ್ಲಿ ‘ಬಹಿಷ್ಕಾರದ, ದ ದುರಂತ ವೈಯಕ್ತಿಕವಾಗಿದೆ. ಉದ್ದಾರ, ನಾಟಕದಲ್ಲಿ ಸಮಾಜದ ಬೇರೆ ಬೇರೆ ಪಂಗಡಗಳ ನಡುವೆ ನಡೆಯುವ ಹೋರಾಟ ನಾಟಕದ ಕ್ರಿಯೆಗೆ ಹೆಚ್ಚು ಶಕ್ತಿಯನ್ನೊದಗಿಸುವುದನ್ನು ಕಾಣುತ್ತೇವೆ.
ಬೇಂದ್ರೆಯವರ ಲೇಖನ ಶಕ್ತಿ ಕನ್ನಡಕ್ಕೇ ಸೀಮಿತವಾಗಿಲ್ಲ. ಮರಾಠಿಯಲ್ಲೂ ಕೃತಿ ರಚನೆ ಮಾಡಿದ್ದಾರೆ. ೧೯೬೫ ರಲ್ಲಿ ಅವರ ಮರಾಠಿ ಕೃತಿ ‘ಸಂವಾದಕ್ಕೆ, ಕೇಳ್ಕರ್, ಬಹುಮಾನ ದೊರೆತಿದೆ. ಅವರು ಇಂಗ್ಲಿಷಿನಿಂದ ಭಾಷಾಂತರ ಮಾಡಿರುವ ಅರವಿಂದರ ಭಾರತೀಯ ಪುನರ್ಜನ್ಮ, ಹಾಗೂ ರಾನಡೆಯವರ ಉಪನಿಷದ್ರಹಸ್ಯಗಳು, ಅಮೂಲ್ಯ ಗ್ರಂಥಗಳು. ‘ವರಕವಿ, ಎಂಬ ಬಿರುದಿಗೆ ಭಾಜನರಾದ ಬೇಂದ್ರೆಯವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ.
೧೯೫೯ ರಲ್ಲಿ ಇವರ ಅರುಳು-ಮರುಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದವು. ೧೯೭೩ ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯು ಅವರ ನಾಕು ತಂತಿ ಕವನ ಸಂಕಲನಕ್ಕೆ ಲಬ್ಯವಾಗಿದೆ. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ ನೇ ಕನ್ನಚಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೯೫ ಬೇಂದ್ರೆ ಶತಮಾನೋತ್ಸವ ವರ್ಷ ರಾಜ್ಯಾದ್ಯಂತ ಅವರ ಸಾಹಿತ್ಯ ಜೀವನ ಕುರಿತ ಚರ್ಚೆಗಳು ನಡೆದವು.
ರಸವೆ ಜನನ
ವಿರಸ ಮರಣ
ಸಮರಸವೇ ಜೀವನ
ಹೀಗೆ ಕೇವಲ ಆರೇ ಆರು ಶಬ್ದಗಳಲ್ಲಿ ಜೀವನವನ್ನು ಕುರಿತು ಅತ್ಯಂತ ಅರ್ಥಗರ್ಬಿತವಾಗಿ, ಪರಿಣಾಮಕಾರಿಯಾಗಿ, ಹೃದಯಸ್ಪರ್ಶಿಯಾಗಿ ವ್ಯಾಖ್ಯಾನ ಮಾಡಿರುವ ದಾರ್ಶನಿಕ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಒಟ್ಟಿನಲ್ಲಿ ಬೇಂದ್ರೆಯವರ ವ್ಯಕ್ತಿತ್ವ ಮಹತ್ವ ಪೂರ್ಣವಾದುದಾಗಿದೆ.
ಕುವೆಂಪು
ಕುವೆಂಪು
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”.
ಜನನ: ಕುವೆಂಪುರವರು ೧೯೦೪ ರ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ ೧೯೨೯ ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, ೧೯೫೫ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ಮೊದಲ ಹಂತ: ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ. ಜತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿ ಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. ೧೯೨೫ ರಲ್ಲಿ ಪ್ರಕಟವಾದ ಕುವೆಂಪುರವರ “ಬೊಮ್ಮನಹಳ್ಳಿ ಕಿಂದರಿಜೋಗಿ” ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
ಬೆಳವಣಿಗೆ: ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು “ಬೆರಳ್ಗೆ ಕೊರಳ್”,”ಶೂದ್ರ ತಪಸ್ವಿ”,”ಸ್ಮಶಾನ ಕುರುಕ್ಷೇತ್ರಂ”, “ರಕ್ತಾಕ್ಷಿ”,”ಜಲಗಾರ” ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ” ಕೊಳಲು”,”ಅಗ್ನಿಹಂಸ”,”ಅನಿಕೇತನ”,”ಅನುತ್ತರಾ”, “ಇಕ್ಷು ಗಂಗೋತ್ರಿ”, “ಕಥನ ಕವನಗಳು”,” ಕಲಾಸುಂದರಿ”, “ಕಿಂಕಿಣಿ”, “ಕೃತ್ತಿಕೆ”, “ಜೇನಾಗುವ”, “ನವಿಲು”, “ಪಕ್ಷಿಕಾಶಿ”, “ಚಿತ್ರಾಂಗದಾ” ಮೊದಲಾದ ಕವನಸಂಕಲನಗಳು, “ರಾಮಕೃಷ್ಣ ಪರಮಹಂಸ”, “ಸ್ವಾಮಿ ವಿವೇಕಾನಂದ” ಜೀವನಚರಿತ್ರೆಗಳನ್ನೂ ಇವರು ಬರೆದಿದ್ದಾರೆ.
“ನೆನಪಿನ ದೋಣಿಯಲ್ಲಿ” ಕುವೆಂಪುರವರ ಆತ್ಮಕಥೆ.
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ರಲ್ಲಿ ಪದ್ಮಭೂಷಣ
೧೯೬೪ ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
೧೯೬೮ ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ
ಮೂರು(೩) ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ
೧೯೮೭ ರಲ್ಲಿ ಪಂಪ ಪ್ರಶಸ್ತಿ
೧೯೮೯ರಲ್ಲಿ ಪದ್ಮವಿಭೂಷಣ
೧೯೯೨ ಕರ್ನಾಟಕ ರತ್ನ ಪ್ರಶಸ್ತಿ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ…’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. “ಅಭಿನವ ವಾಲ್ಮೀಕಿ” ಎಂದೇ ಜನಮಾನಸದಲ್ಲಿ ಪ್ರಸಿದ್ಧರಾದ ಕುವೆಂಪುರವರು ೧೯೯೪ ನವೆಂಬರ್ ೧೧ರಂದು ಮೈಸೂರಿನ ತಮ್ಮ ನಿವಾಸ ಉದಯರವಿಯಲ್ಲಿ ನಿಧನರಾದರು.
Wednesday, 2 September 2015
ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರ
ಜೀವಿಗಳಲ್ಲಿ ಆಹಾರವು ಹೇಗೆ ಶಕ್ತಿಯಾಗಿ ಪರಿವರ್ತಿತವಾಗುತ್ತದೆ?
ಒಂದು ಪರಿಸರವ್ಯವಸ್ಥೆಯಲ್ಲಿನ ವಿವಿಧ ಜೀವಿಗಳು ನಿರಂತರವಾಗಿ ಬೆಳೆಯುತ್ತವೆ, ಸಂತಾನೋತ್ಪತ್ತಿ ಮಾಡುತ್ತವೆ, ಸಾಯುತ್ತವೆ ಮತ್ತು ವಿಘಟನೆಗೆ ಒಳಗಾಗುತ್ತವೆ. ಅವುಗಳ ಚಟುವಟಿಕೆಗಳಿಗೆ ಶಕ್ತಿಯ ಅವಶ್ಯಕತೆ ಇದೆ. ಜೀವಿಗಳು ಆಹಾರ ಸೇಏಸಿದಾಗ, ಅದರಲ್ಲಿರುವ ಕಾರ್ಬೋಹೈಡ್ರೇಟನ ಅಂಶ ಶಕ್ತಿಯ ಆಕರವಾಗುತ್ತದೆ. ನಿಮಗೆ ಗೊತ್ತಿರುವಂತೆ, ಉಸಿರಾಟದ ಪರಿಣಾಮವಾಗಿ ಆಹಾರದಲ್ಲಿರುವ ಶಕ್ತಿ ಬಿಡುಗಡೆಯಾಗುತ್ತದೆ. ಉಸಿರಾಟ ಕ್ರಿಯೆಯುಕಾರ್ಬೋಹೈಡ್ರೇಟಗಳಲ್ಲಿ ಸಂಗ್ರಹವಾಗಿರುವ ಶಕ್ತಿಯನ್ನು ಜೈವಿಕ ಕ್ರಿಯೆಗಳಿಗೆ ಒದಗಿಸುತ್ತದೆ.
ಎಲ್ಲ ಪರಿಸರವ್ಯವಸ್ಥಗಳಲ್ಲಿ ಸೂರ್ಯನ ಶಕ್ತಿಯೇ ಶಕ್ತಿಯ ಪ್ತಾಥಮಿಕ ಆಕರ. ನಿಮಗೆ ತಿಳಿದಿರುವರತೆ ಈ ಶಕ್ತಿಯನ್ನು ನೇರವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಇರುವುದು ಹಸಿರು ಸಸ್ಯಗಳಿಗೆ ಮಾತ್ತ. ಅವು ಈ ಶಕ್ತಿಯನ್ನು , ಕಾರ್ಬೋಹೈಡ್ರೇಟ್ , ಕೊಬ್ಬು ಹಾಗೂ ಪ್ರೊಟೀನ್ ಗಳ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ. ಈ ಸಸ್ಯಗಳನ್ನು ಭಕ್ಷಕರು ಸೇವಿಸಿದಾಗ, ಪೋಷಣಾ ಸ್ತರಗಳಲ್ಲಿ ಶಕ್ತಿಯು ಏಕಮುಖವಾಗಿ ಸಂಚರಿಸುತ್ತೆದೆ.
ಆದರೆ, ಈ ವರ್ಗಾವಣೆ ಪ್ರಕ್ರಿಯಲ್ಲಿ ಶೇ 90% ರಷ್ಟು ಶಕ್ತಿಯು ಪುನಃ ಬಳಸಿಕೊಳ್ಳಲಾಗದ ಉಷ್ಣದ ರೂಪದಲ್ಲಿ ಪರಿಸರದಲ್ಲಿ ನಷ್ಟವಾಗುತ್ತದೆ. ಪೋಷಣಾಸ್ತರದಲ್ಲಿ ಮೇಲೇರಿದಲತೆ, ಪ್ರತಿ ಹಂತದಲ್ಲಿ ಬಳಕೆಗೆ ಒದಗುವ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಪೋಷಣಾಸ್ತೆರದಲ್ಲಿ ಒದಗುವ ಒಟ್ಟು ಶಕ್ತಿಯ ಪ್ರಮಾಣದಲ್ಲಿ ಕೇವಲ ಶೇಕಡಾ 10 ರಷ್ಟು ಮಾತ್ತ ಮುಂದಿನ ಪೋಷಣಾಸ್ತರಕ್ಕೆ ವರ್ಗಾವಣೆಯಾಗುತ್ತದೆ. ಉತ್ಪಾದಕ ಸಸ್ಯವೊಂದರಿದರಲೆ 10,000 ಘಟಕಗಳಷ್ಟು ಆಹಾರ ಶಕ್ತಿ ಇದ್ದರೆ ಮುಂದಿನ ಹಂತದ ಪ್ರಾಥಮಿಕ ಭಕ್ಷಕವನ್ನು ಸೇರುವ ಶಕ್ತಿಯ ಪ್ರಮಾಣ ಸುಮಾರು 1000 ಘಟಕಗಳಷ್ಟಿರುತ್ತದೆ. ದ್ವಿತೀಯಕ ಭಕ್ಷಕವನ್ನು ಸೇರುವ ಶಕ್ತಿಯ ಪ್ರಮಾಣ. ಕೇವಲ ೧೦೦ ಘಟಕಗಳಷ್ಟಿರುತ್ತದೆ,ಮತ್ತು ತ್ರುತೀಯಕ ಭಕ್ಷಕವನ್ನು ಸೇರುವ ಪ್ರಮಾಣ. ಕೇವಲ ೧೦ ಘಟಕಗಳಷ್ಟಿರುತ್ತದೆ.
ಹೀಗಾಗಿ ಪರಿಸರದಲ್ಲಿ ಶಕ್ತಿಯ. ಸಂಚಾರವು ಏಕ ಮುಖವಾಗಿದ್ದು ಪ್ರತಿ ಪೋಷಣಾಸ್ತರದಲ್ಲಿ ಬಳಕೆಗೆ ಒದಗದ ಉಷ್ಣದ ರೂಪದಲ್ಲಿ ಶಕ್ತಿಯು ಪರಿಸರವನ್ನು ಸೇರುತ್ತದೆ.